ದೌರ್ಜನ್ಯದ ವಿರುದ್ಧ ದನಿಯೆತ್ತುವ ‘ಗಂಗಾ’
Posted date: 10 Thu, Mar 2016 – 10:09:40 AM

 ಹೊಸಹೊಸ ಶೈಲಿಯ ವಿನೂತನ ಕಾರ್ಯಕ್ರಮಗಳನ್ನು ನೀಡುವ ಮೂಲಕ ವೀಕ್ಷಕರ ಹೃದಯಕ್ಕೆ  ಹತ್ತಿರವಾಗುತ್ತಿರುವ ಜೀ ಕನ್ನಡ ವಾಹಿನಿ ಈಗ ಮತ್ತೊಂದು ಸಾಮಾಜಿಕ ಧಾರಾವಾಹಿಯನ್ನು ಕನ್ನಡಿಗರಿಗೆ ಕೊಡಲು ಅಣಿಯಾಗಿದೆ.  ಈಗಾಗಲೇ ಸರಿಗಮಪ ಸೀಸನ್ ೧೧, ವೀಕೆಂಡ್ ವಿಥ್ ರಮೇಶ್-೨ ದಂಥ ರಿಯಾಲಿಟಿ ಷೋಗಳನ್ನು ಹಾಗೂ ಮಹಾದೇವಿ, ಶ್ರೀಮಾನ್ ಶ್ರೀಮತಿ ಮತ್ತು ನಾಗಿಣಿಯಂಥ ಧಾರಾವಾಹಿಗಳ ಮೂಲಕ ತನ್ನದೇ ಆದ ವೀಕ್ಷಕರನ್ನು ಹೊಂದಿರುವ ಜೀ ವಾಹಿನಿ ಈಗ ಗಂಗಾ ಎಂಬ ಮತ್ತೊಂದು ಸಾಮಾಜಿಕ ಧಾರಾವಾಹಿಯನ್ನು  ನೋಡುಗರಿಗೆ ತಲುಪಿಸಲು ಸಿದ್ಧವಾಗಿದೆ.
   ಮದುವೆ ಎಂಬ ಮೂರಕ್ಷರದ ಅರ್ಥ ಗೊತ್ತಾಗುವ ಮೊದಲೇ ವಿಧವೆಯ ಪಟ್ಟ ಧರಿಸುವ ಒಬ್ಬ    ಮುಗ್ಧ ಬಾಲಕಿಯ ಕಥೆಯನ್ನು ಗಂಗಾ ಧಾರಾವಾಹಿಯಲ್ಲಿ ಹೇಳಲಾಗಿದೆ. ತಾನು  ಹಾಗೂ ತನ್ನ ತಂದೆ, ಇದಿಷ್ಟೇ ತನ್ನ ಪ್ರಪಂಚ ಎಂದು ತಿಳಿದಿದ್ದ ಮುಗ್ಧ ಬಾಲಕಿ ಗಂಗಾಳಿಗೆ, ಕಾರಣಾಂತರಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿರುತ್ತದೆ. ಅವಳಿಗೆ ಅದರ ಬಗ್ಗೆ ಅರಿವಾಗುವ ಮುನ್ನವೇ. ವಿಧಿಯಾಟದಿಂದ ಅವಳು ವಿಧವೆಯಾಗುತ್ತಾಳೆ. ೮-೯ ವರ್ಷದ ಒಬ್ಬ ಪುಟ್ಟ ಮಗು ತನ್ನ ಜೀವನದಲ್ಲಿ ಆದ ಆಘಾತವನ್ನು ಸಹಿಸಿಕೊಂಡು ಹೇಗೆ ತನ್ನ ಜೀವನವನ್ನು ಆಶಾಭಾವದಿಂದ ಎದುರಿಸುತ್ತಾಳೆ, ತಂದೆ ಹೇಳಿಕೊಟ್ಟ ಜೀವನ ಪಾಠಗಳನ್ನು ಹೇಗೆ ತನ್ನ ಜೀವನದಲ್ಲಿ ಅಳವಡಿಸಿಕೊಂಡು, ಎ ಸಮಸ್ಯೆಗಳಿಂದ ಹೇಗೆ ಹೊರಬರುತ್ತಾಳೆ ಎಂಬುದೇ ಈ  ದೈನಿಕ ಧಾರಾವಾಹಿಯ ಸಾರಾಂಶ.
   ಗಂಗಾ ತನ್ನ ಮುಗ್ಧತೆಯಿಂದ ಸಮಾಜದ ಪಿಡುಗುಗಳನ್ನು, ಶಾಸ್ತ್ರ ಸಂಪ್ರದಾಯದ ಹೆಸರಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ದನಿ ಎತ್ತುತ್ತಾಳೆ. ಉತ್ತರ ಕನ್ನಡ ಜಿಯ ಹಳ್ಳಿಯೊಂದರ  ಹುಡುಗಿಯಾದ ಗಂಗಾ, ಉತ್ತರ ಕರ್ನಾಟಕದ ವಾಡೆ ಮನೆಗೆ ಏಕೆ ಹೋಗುತ್ತಾಳೆ? ಅಲ್ಲಿನ ಕಟ್ಟುಪಾಡುಗಳಿಗೆ ಬದ್ಧಳಾಗಿ, ಮಾನವೀಯತೆ, ಸತ್ಯ, ನ್ಯಾಯ, ನೀತಿ, ನಿಷ್ಠೆಯ ಪರವಾಗಿ ಹೇಗೆ ನಿಲ್ಲುತ್ತಾಳೆ ಎಂದು ಹಂತ ಹಂತವಾಗಿ ಇಲ್ಲಿ  ನಿರ್ದೇಶಕರು ನಿರೂಪಿಸಿದ್ದಾರೆ.
   ಈ ಹಿಂದೆ ಬಂದ ಗೃಹಲಕ್ಷ್ಮಿ ಧಾರಾವಾಹಿಯ  ಯಶಸ್ಸಿನ ನಂತರ, ಗಂಗಾ ಧಾರಾವಾಹಿಯನ್ನು ಆರ್. ಆರ್. ಆರ್. ಕ್ರಿಯೇಷನ್ಸ್ ಸಂಸ್ಥೆ ಈ ಹೊಸ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಮುಂಗಾರು ಮಳೆ, ಕೆಂಪೇಗೌಡ, ಗಜಕೇಸರಿ ಚಿತ್ರಗಳ ಖ್ಯಾತಿಯ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯಲ್ಲಿ, ಹಲವಾರು ನುರಿತ ಕಲಾವಿದರು ಹಾಗೂ ತಂತ್ರಜ್ಞರು ಕೆಲಸ ಮಾಡುತ್ತಿzರೆ. ಇದೇ ಮಾರ್ಚ ೧೪ರಿಂದ, ರಾತ್ರಿ ೯.೩೦ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಗಂಗಾ ಧಾರಾವಾಹಿ ಪ್ರಸಾರವಾಗಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed